ರೂ.2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳು -ಚಲಾವಣೆಯಿಂದ ಹಿಂಪಡೆಯುವಿಕೆ; ಶಾಸನಬದ್ಧ ಚಲಾವಣೆಯಲ್ಲಿ ಮುಂದುವರಿಯುತ್ತದೆ
ಮೇ 19, 2023 ರೂ.2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳು -ಚಲಾವಣೆಯಿಂದ ಹಿಂಪಡೆಯುವಿಕೆ; ಶಾಸನಬದ್ಧ ಚಲಾವಣೆಯಲ್ಲಿ ರೂ.500 ಮತ್ತು ರೂ. 1000 ಮೌಲ್ಯ ವರ್ಗದ ನೋಟುಗಳನ್ನು ಶಾಸನಬದ್ಧ ಚಲಾವಣೆಯಿಂದ ಹಿಂತೆಗೆದುಕೊಂಡ ಸಮಯದಲ್ಲಿ ಇದ್ದ ಪರಿಸ್ಥಿತಿಯಲ್ಲಿ ಆರ್ಥಿಕತೆಗೆ ಅಗತ್ಯವಿದ್ದ ಕರೆನ್ಸಿ ನೋಟುಗಳ ಶೀಘ್ರ ಪೂರೈಕೆಯ ಪ್ರಾಥಮಿಕ ಉದ್ದೇಶಕ್ಕಾಗಿ RBI ಅಧಿನಿಯಮ, 1934 ರ ಪ್ರಕರಣ 24 (1) ರ ಅಡಿಯಲ್ಲಿ ರೂ. 2000 ಮೌಲ್ಯ ವರ್ಗದ ನೋಟನ್ನು ನವಂಬರ್, 2016 ರಲ್ಲಿ ಪರಿಚಯಿಸಲಾಯಿತು. ಇತರೇ ಮೌಲ್ಯ ವರ್ಗದ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ಕಾರಣ, ರೂ.2000 ಬಿಡುಗಡೆಯ ಉದ್ದೇಶವೂ ಈಡೇರಿದ್ಧರಿಂದ 2018-19 ರಲ್ಲಿ ರೂ.2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳ ಮುದ್ರಣ ಸ್ಥಗಿತ ಗೊಳಿಸಲಾಯಿತು. 2. 2017 ರ ಮಾರ್ಚ ಅವಧಿಯ ಒಳಗೆ ನೀಡಲಾದ ರೂ.2000 ಮೌಲ್ಯ ವರ್ಗದ ಶೇ.89 ರಷ್ಟು ಬ್ಯಾಂಕು ನೋಟುಗಳು ಅವಕ್ಕೆ ಇರುವ 4-5 ವರ್ಷಗಳ ಜೀವಿತಾವಧಿಯನ್ನು ಪೂರೈಸಿವೆ. ಮಾರ್ಚ್ 31, 2018ಕ್ಕೆ ಇದ್ದ ರೂ.6.73 ಲಕ್ಷ ಕೋಟಿ ಗರಿಷ್ಠ ಪ್ರಮಾಣದ (ಚಲಾವಣೆಯಲ್ಲಿದ್ದ 37.3% ನೋಟುಗಳು)ನೋಟುಗಳು, ಮಾರ್ಚ್ 31, 2023 ರ ವೇಳೆಗೆ 3.62 ಲಕ್ಷ ಕೋಟಿಗಳ ಮೊತ್ತಕ್ಕೆ ತಲುಪಿದ್ದು, ಇವುಗಳ ಪ್ರಮಾಣ ಕೇವಲ ಶೇ 10.8 ಆಗಿದೆ. ಈ ಮೌಲ್ಯ ವರ್ಗದ ನೋಟುಗಳನ್ನು ವ್ಯವಹಾರಗಳಲ್ಲಿ ಸಾಮಾನ್ಯವಾಗಿ ಬಳಕೆ ಮಾಡುತಿಲ್ಲವೆಂಬುದನ್ನೂ ಸಹಾ ಗಮನಿಸಲಾಗಿದೆ. ಮುಂದುವರಿದಂತೆ, ಸಾರ್ವಜನಿಕರ ಅಗತ್ಯತೆಗಾಗಿ ಇತರೇ ಮೌಲ್ಯ ವರ್ಗದ ಬ್ಯಾಂಕು ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯತೆ ಇರುತ್ತದೆ. 3. ಮೇಲೆ ತಿಳಿಸಿರುವ ಅಂಶಗಳಿಂದ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಸ್ವಚ್ಛ ನೋಟು ನೀತಿಯನ್ನು ಪಾಲಿಸುವ ಸಲುವಾಗಿ ರೂ.2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ. 4. ರೂ. 2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳು ಶಾಸನಬದ್ಧ ಚಲಾವಣೆಯಲ್ಲಿ ಮುಂದುವರಿಯುತ್ತವೆ. 5. 2013-14 ರ ಅವಧಿಯಲ್ಲೂ ಸಹಾ ಇದೇ ರೀತಿ, ಭಾರತೀಯ ರಿಸರ್ವ್ ಬ್ಯಾಂಕ್ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದುಕೊಂಡಿತ್ತು. 6. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕರು ರೂ.2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳನ್ನು ತಮ್ಮ ಬ್ಯಾಂಕು ಖಾತೆಗೆ ಜಮಾ ಮಾಡಬಹುದು/ಅಥವಾ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಬೇರೆ ಮೌಲ್ಯ ವರ್ಗದ ಬ್ಯಾಂಕು ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಬಹುದು. ಎಂದಿನಂತಯೇ ಎಂದರೆ ಯಾವುದೇ ನಿರ್ಬಂಧವಿಲ್ಲದೇ ಮತ್ತು ಪ್ರಸ್ತುತ ಸೂಚನೆಗಳಿಗೆ ಹಾಗೂ ಶಾಸನಬದ್ಧ ಷರತ್ತುಗಳಿಗೆ ಒಳಪಟ್ಟು ಖಾತೆಗೆ ಜಮಾ ಮಾಡಬಹುದು 7. ಸುಲಲಿತ ಕಾರ್ಯ ನಿರ್ವಹಣೆಯನ್ನು ಖಚಿತಪಡಿಸಿಕೂಳುವುದಕ್ಕಾಗಿ ಮತ್ತು ಬ್ಯಾಂಕು ಶಾಖೆಯ ದೈನಂದಿನ ಕಾರ್ಯಗಳಿಗೆ ಅಡ್ಡಿಯಾಗಬಾರದೆಂಬ ಉದ್ದೇಶಕ್ಕಾಗಿ ಒಂದು ಬಾರಿಗೆ 20000 ರೂ. ಗಳ ಮಿತಿಗೆ ಒಳಪಟ್ಟು, ಯಾವುದೇ ಬ್ಯಾಂಕಿನಲ್ಲಿ ರೂ.2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳನ್ನು ಮೇ 23, 2023 ರಿಂದ ಇತರೇ ಮೌಲ್ಯ ವರ್ಗದ ಬ್ಯಾಂಕು ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಬಹುದು. 8. ಈ ಬದಲಾವಣೆ ಪ್ರಕ್ರಿಯನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸಲು ಮತ್ತು ಸಾರ್ವಜನಿಕರಿಗೆ ಸಾಕಷ್ಟು ಸಮಯಾವಕಾಶ ನೀಡುವ ಸಲುವಾಗಿ ರೂ. 2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳನ್ನು ಠೇವಣಿ/ಬದಲಾವಣೆ ಮಾಡುವ ಸೌಲಭ್ಯವನ್ನು ಸೆಪ್ಟಂಬರ್ 30, 2023 ರ ವರೆಗೆ ಒದಗಿಸತಕ್ಕದ್ದು. ಈ ಬಗ್ಗೆ ಪ್ರತ್ಯೇಕ ಮಾರ್ಗ ಸೂಚಿಯನ್ನು ಬ್ಯಾಂಕುಗಳಿಗೆ ನೀಡಲಾಗಿದೆ. 9. ಒಂದು ಬಾರಿಗೆ ರೂ. 2000 ದ ಮಿತಿಗೆ ಒಳಪಟ್ಟು, ಬದಲಾವಣೆ ಸೌಲಭ್ಯವನ್ನು ನೀಡಿಕೆ ಇಲಾಖೆ ಇರುವ ಭಾರತೀಯ ರಿಸರ್ವ್ ಬ್ಯಾಂಕಿನ 19 ಪ್ರಾದೇಶಿಕ ಕಚೇರಿಗಳಲ್ಲೂ (ROs)* ಸಹಾ ಸೆಪ್ಟಂಬರ್, 30, 2023 ರ ವರೆಗೂ ಬದಲಾವಣೆ ಸೌಲಭ್ಯ ನೀಡಲಾಗುತ್ತದೆ. 10. ಈ ತಕ್ಷಣದಿಂದಲೇ ರೂ.2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳ ನೀಡಿಕೆಯನ್ನು ನಿಲ್ಲಿಸುವಂತೆ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಸೂಚಿಸಿದೆ. 11. ರೂ.2000 ಮೌಲ್ಯ ವರ್ಗದ ಬ್ಯಾಂಕು ನೋಟುಗಳನ್ನು ಠೇವಣಿ/ಬದಲಾವಣೆ ಮಾಡಿಕೊಳ್ಳಲು ಸೆಪ್ಟಂಬರ್ 20, 2023 ರ ವರೆಗೆ ಇರುವ ಕಾಲವಕಾಶವನ್ನು ಉಪಯೋಗ ಮಾಡಿಕೊಳ್ಳಲು ಸಾರ್ವಜನಿಕರಿಗೆ ವಿನಂತಿಸಲಾಗಿದೆ. ಈ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳ (FAQs) ಸಂಬಂಧ ಪ್ರಶ್ನೋತ್ತರಗಳನ್ನು ಆರ್ ಬಿ ಐ ವೆಬ್ ತಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಅವಗಾಹನೆಗಾಗಿ ಪ್ರಕಟಿಸಲಾಗಿದೆ. (ಯೋಗೇಶ್ ದಯಾಳ್) ಪತ್ರಿಕಾ ಪ್ರಕಟಣೆ: 2023-2024/257 * ಅಹ್ಮದಾಬಾದ್, ಬೆಂಗಳೂರು, ಬೇಲಾಪುರ್, ಭೊಪಾಲ್, ಭುವನೇಶ್ವರ್, ಚಂಡೀಘರ್, ಚೆನ್ನೈ, ಗುವಾಹಾತಿ, ಹೈದರಾಬಾದ್, ಜೈಪುರ್, ಜಮ್ಮು, ಲಕ್ನೋ, ಮುಂಬೈ, ನಾಗ್ಪುರ್, ನವ ದೆಹಲಿ, ಪಾಟ್ನ ಮತ್ತು ತಿರುವನತಪುರಂ |
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: